This is the title of the web page
This is the title of the web page

Live Stream

[ytplayer id=’22727′]

| Latest Version 8.0.1 |

Feature Article

ಎ.ಎಸ್.ಮಕಾನದಾರ ಅವರ ಕವಿತೆ.. ತುಟಿಯ ಬೆಟ್ಟ…

ಎ.ಎಸ್.ಮಕಾನದಾರ ಅವರ ಕವಿತೆ.. ತುಟಿಯ ಬೆಟ್ಟ…

ತುಟಿಯ ಬೆಟ್ಟ

ಒಮ್ಮೆ ಮೀಟಿ ಬಿಡು ಗೆಳತಿ
ನನ್ನೆದೆಯ ವೀಣೆ
ನಿನ್ನ ಕಣ್ಣೋಟದ ತಂತಿಯಿಂದ ಮಧು ಹೀರಿ
ಅಮಲೇರಿದಂತಾಗಿದೆ.
ದಣಿದ ದೇಹ ಕಣ್ಣ ಸೂರ್ಯ
ಕತ್ತಲೂರಿಗೂ
ಸಲಾಂ ಹೇಳುತಿಹನು.
ತುಟಿಯ ಬೆಟ್ಟದ
ತುತ್ತ ತುದಿಯಿಂದ ಜಾರಿ ಬೀಳುತಿಹನು.

ಅರ್ಜುನ ನ ಬಾಣಕ್ಕಿಂತಲೂ
ತೀಕ್ಷಣವಾಗಿದೆ
ನಿನ್ನ ಮಾದಕತೆಯ ಕಣ್ಣೋಟ
ಉಳಿ ಸುತ್ತಿಗೆಗೆ ಕರಗಲೊಲ್ಲದು;
ಕಲ್ಲಾದ ಹೃದಯ
ಮೇಣದಂತೆ ಕರಗಿದೆ.

-ಎ.ಎಸ್.ಮಕಾನದಾರ, ಗದಗ.


Jana Dhwani
the authorJana Dhwani