This is the title of the web page
This is the title of the web page

Live Stream

[ytplayer id=’22727′]

| Latest Version 8.0.1 |

Entertainment News

ಬೇವು ಬೆಲ್ಲದಲಿ.. ಶಂಕರಾನಂದ ಹೆಬ್ಬಾಳರವರ ಗಜಲ್

ಬೇವು ಬೆಲ್ಲದಲಿ.. ಶಂಕರಾನಂದ ಹೆಬ್ಬಾಳರವರ ಗಜಲ್PC: Google

ಗಝಲ್

ಬೇವು ಬೆಲ್ಲದಲಿ ಸುಹೃದ್ಯತೆ ತೆರೆಯುತಿದೆ
ಈ ದಿನ
ಮಾವಿನ ತಳಿರು ತೋರಣದಿ ಮೆರೆಯುತಿದೆ
ಈ ದಿನ

ಸಂಹೃಷ್ಟ ಭಾವವಿದು ಸಂಭ್ರಮದಿ ತೇಲಿತೇಕೆ
ನೋಡು
ಶುಕಪಿಕಗಳ ಹರ್ಷದಿ ನಲಿವನು ಎರೆಯುತಿದೆ
ಈ ದಿನ

ಕಣ್ಮನವನು ಸೆಳೆಯುವ ಪ್ರಕೃತಿಯ ತರುಗಳ
ಸೊಬಗು
ವನದಲಿ ಶಾಡ್ವಲವನು ಹಾಸುತ್ತ ಕರೆಯುತಿದೆ
ಈ ದಿನ

ಕುಕಿಲಕೆ ವಸಂತಾಗಮನ ಮುದವನು ತಂದು
ಕೊಟ್ಟಿತೇ
ಸತ್ಪಾತ್ರಕೆ ಸುಕೃತ ಕಾರ್ಯವಿದು ಬೆರೆಯುತಿದೆ
ಈ ದಿನ

ಅಭಿನವನ ಪದಗಳಲಿ ನವೋಲ್ಲಾಸ ತುಂಬಿ
ಬಂದಿತಲ್ಲ
ಕಹಿನೆನನಪು ಮೋಡದಂತೆ ಹಿಂದೆ ಸರಿಯುತಿದೆ
ಈ ದಿನ

ಶಂಕರಾನಂದ ಹೆಬ್ಬಾಳ


Jana Dhwani
the authorJana Dhwani