![]() |
![]() |
![]() |
![]() |
![]() |

ಗಝಲ್..
ಮೂಲ: ಅದೀಮ ಹಾಶ್ಮೀ
ಅನು: ನೋರಾ
ದೂರಗಳು ಹೀಗೂ ಇರುತ್ತವೆ ಹೀಗೆಂದೂ ಯೋಚಿಸಿರಲಿಲ್ಲ…
ಕುಳಿತಿದ್ದ ನನ್ನ ಮುಂದೆ ಆದರೆ ಅವನು ನನ್ನವನಾಗಿರಲಿಲ್ಲ…
ಅವನು ಸುಂಗಂಧದಂತೆ ಆವರಿಸಿದ್ದ ನನ್ನ ಸುತ್ತಲೂ
ನಾನು ಅವನ ಅನುಭವಿಸುತ್ತಿದ್ದೆ ಆದರೆ ಸ್ಪರ್ಶಿಸುವಂತಿರಲಿಲ್ಲ…
ರಾತ್ರಿಯಿಡೀ ಹಿಂದಿನಂತೆ ಸದ್ದೊಂದು ಕಿವಿಯವರೆಗೂ ಬರುತ್ತಿತ್ತು
ಇಣುಕಿ ನೋಡಿದೆ ಓಣಿಯಲ್ಲಿ ಯಾರೂ ಬಂದಿರಲಿಲ್ಲ…
ನಾನು ನಿನ್ನ ಮುಖ ಹೊತ್ತು ಇಡೀ ಲೋಕದೊಳಗೆ ಅಲೆದೆ
ಆದರೆ ಇಡೀ ಜಗದಲಿ ಯಾರೂ ನಿನ್ನಂತವನಿರಲಿಲ್ಲ..
ಈ ಎಲ್ಲಾ ಒಂಟಿತನಗಳು ಅವನ ಅಗಲಿಕೆಯಿಂದ
ಕಣ್ಣು ಮಸುಕಾಗಿತ್ತು ಶಹರದು ಮಸುಕಾಗಿರಲಿಲ್ಲ…
ತುಟಿಗಳೇ! ಸಾವಿರಾರು ತೂಫಾನುಗಳು ಅಕ್ಷರಗಳಲಿ ಅಡಗಿದ್ದವು…
ಒಂದು ಕಲ್ಲಿತ್ತು ಮೌನದ್ದು ಅದು ಕದಲುತ್ತಿರಲಿಲ್ಲ….
ನೆನಪಾಗಿ ಇನ್ನೂ ನೋವಾಗುತ್ತಿತ್ತು ‘ಅದೀಮ’
ಮರೆಯುವದೊಂದ ಬಿಟ್ಟು ಮತ್ತಾವ ಉಪಾಯವಿರಲಿಲ್ಲ…
![]() |
![]() |
![]() |
![]() |
![]() |