ಕೃತಿಯ ಶೀರ್ಷಿಕೆ: ಮೌನ ನಗರಿಯ ಮಾತು (ಗಜಲ್ ಗಳು)
ಲೇಖಕರು: ಸೈಯದ್ ಸಿಕಂದರ್ ಮೀರ್ ಅಲಿ (ಸಿಕಂದರ್ ಅಲಿ)
ಪ್ರಕಾಶಕರು: ಮನ್ವಂತರ ಪ್ರಕಾಶನ, ತೋರಣಗಲ್ಲು-583123
ಪರಿಚಯ: ಪ್ರಭಾವತಿ.ಎಸ್.ದೇಸಾಯಿ, ವಿಜಯಪುರ
ಬಳ್ಳಾರಿ ಜಿಲ್ಲೆಯ ತೋರಣಗಲ್ಲು ನಿವಾಸಿಯಾದ ಸೈಯದ್ ಸಿಕಂದರ್ ಮೀರ್ ಅಲಿ ಅವರು ಉತ್ಸಾಹಿ ಯುವ ಸಾಹಿತಿಯಾಗಿ, ಸಂಘಟನಾಕಾರರಾಗಿ, ದನಿ ಇಲ್ಲದವರಿಗೆ ದನಿಯಾಗಿ, ಜನಧ್ವನಿ ಆನ್‍ಲೈನ್ ಡಾಟ್ ಕಾಂ ವೆಬ್ ಪೆÇೀರ್ಟಲ್‍ನಲ್ಲಿ ಕರ್ನಾಟಕದ 35ಕ್ಕೂ ಹೆಚ್ಚು ಪ್ರಮುಖ ಮಹಿಳಾ ಸಾಹಿತಿಗಳ ಸಂದರ್ಶನ ಮಾಡಿ ನಾಡಿನಾದ್ಯಂತ ಚಿರಪರಿಚಿತರಾದವರು. ಸೈಯದ್ ಸಿಕಂದರ್ ಮೀರ್ ಅಲಿ ಅವರು ಉರ್ದು, ಹಿಂದಿ, ಕನ್ನಡ ಭಾಷೆಯಲ್ಲಿ ಪ್ರಭುತ್ವವನ್ನು ಹೊಂದಿದ್ದು, ಉರ್ದು, ಹಿಂದಿ ಗಜಲ್ ಕಾವ್ಯಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ರೀತಿ, ರಿವಾಜ್‍ಗಳನ್ನು ಅರಿತು ಕನ್ನಡ ಗಜಲ್ ಕಾವ್ಯದಲ್ಲಿ ಅವುಗಳನ್ನು ಅಳವಡಿಸಿಕೊಂಡು ಉತ್ತಮವಾದ ಗಜಲ್, ಶಾಯರಿಗಳನ್ನು ರಚಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾ ಉತ್ತಮ ಗಜಲ್ ಕಾರರು ಎಂದು ಹೆಸರು ಪಡೆದಿದ್ದಾರೆ. ಧರೆಯ ಮಾತು, ಮನ್ವಂತರ, ಗಜಲ್ ತೊರೆ, ಗಜಲ್ ಸಂಭ್ರಮ ಗುಂಪುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾ ಎಲ್ಲರ ಮೆಚ್ಚಿನ ಯುವ ಸಂಘಟನಾಕಾರರೆಂದು ಹೆಸರು ಗಳಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಾಹಿತಿಗಳು ಕರುನಾಡಿನಲ್ಲಿ ಬಂಡಾಯದ ಸಾಹಿತ್ಯ ರಚನೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಆ ನೆಲ, ಜಲದ ಸತ್ವ ಇವರಲ್ಲಿಯೂ ಮೈಗೂಡಿಕೊಂಡು ಇವರ ಗಜಲ್ ಕಾವ್ಯ ಸಾಹಿತ್ಯದಲ್ಲಿಯೂ ಹರಿದು ಬಂದಿದೆ. ಅನೇಕ ಕವಿಗೋಷ್ಠಿಗಳಲ್ಲಿ ಗಜಲ್ ಗಳನ್ನು ವಾಚನ ಮಾಡಿ ಜನರ ಮನ ಗೆದ್ದಿದ್ದಾರೆ.
ಗಜಲ್ ಉರ್ದು ಸಾಹಿತ್ಯದ ಕಾವ್ಯರಾಣಿಯಾಗಿ ಮೆರೆಯುತ್ತಿದ್ದಾಳೆ, ಉರ್ದು ಭಾಷೆಯು ಮಾಧುರ್ಯ ಸೌಂದರ್ಯ ಮೃದುತ್ವ, ಲಾಲಿತ್ಯ, ಲಯ, ಗೇಯತೆ, ರಮ್ಯತೆ ಮತ್ತು ಭಾವನೆಗಳನ್ನು ಪಡೆದುಕೊಂಡಿದೆ. ಇಂತÀಹ ಸುಂದರವಾದ ಗಜಲ್ ಸಾಹಿತ್ಯಕ್ಕೆ ಮೋಹಗೊಂಡು ಕನ್ನಡದ ಕವಿಗಳು ಕನ್ನಡದ ಗಜಲ್‍ಗಳನ್ನು ರಚಿಸಿ ಪ್ರಕಟಿಸುತ್ತಿದ್ದಾರೆ. ಸಿಕಂದರ್ ಅಲಿ ಅವರು ಬಾಲ್ಯದಿಂದಲೇ ಅಜ್ಜ ಅಜ್ಜಿಯವರು ಹಾಡುವ ಉರ್ದು ಹಾಗೂ ಹಿಂದಿ ಗಜಲ್‍ಗಳನ್ನು ಕೇಳಿ ಬೆಳೆದವರು ಸಹಜವಾಗಿಯೇ ಗಜಲ್ ಸಾಹಿತ್ಯಕ್ಕೆ ಮರುಳಾಗಿ ಗಜಲ್ ರಚನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಿಕಂದರ್ ಅಲಿ ಅವರ ಗಜಲ್ ಸಾಹಿತ್ಯ ಕೃತಿ ಶೀರ್ಷಿಕೆ ಮೌನ ನಗರಿಯ ಮಾತು ಶಿರೋ ನಾಮವೇ ಒಂದು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಈ ಕೃತಿಯಲ್ಲಿ ಮುನ್ನುಡಿ ಇಲ್ಲ, ಕನ್ನಡದ ಗಜಲ್ ರಚನಾ ಕ್ಷೇತ್ರದಲ್ಲಿ ದಿಗ್ಗಜರೆಂದು ಹೆಸರು ಪಡೆದ ಹಾವೇರಿಯ ನೂರ್ ಅಹಮದ್ ನಾಗನೂರ್, ಬೆಳಗಾವಿಯ ಚಂದ್ರಶೇಖರ್ ಎಲ್ಲಪ್ಪ ಪೂಜಾರ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಲೇಖಕರು ಹಾಗೂ ಗಜಲ್ ಕಾರರಾದ ಶಹಾಪುರದ ಸಿದ್ದರಾಮ ಹೊನ್ಕಲ್ ಈ ಮೂವರು ಗಜಲ್‍ಗಳು ಮುದ್ರಣಕ್ಕೆ ಹೋಗುವ ಮುಂಚೆ ಅವುಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದಿದ್ದಾರೆ. ಕಾವ್ಯಮನೆ ಪ್ರಕಾಶಕರು, ಕವಿ, ವಿಮರ್ಶಕರು, ಸಾಹಿತ್ಯ ರಚನೆಯಲ್ಲಿ ಅನೇಕರಿಗೆ ಮಾರ್ಗದರ್ಶಕರಾದ ಅಬ್ದುಲ್ ಹೈ. ತೋರಣಗಲ್ ಇವರು ತೂಕಬದ್ಧವಾದ ಬೆನ್ನುಡಿಯನ್ನು ಬರೆದಿದ್ದಾರೆ. ಸಂಕಲನದ ಮುಖಪುಟ ಚಿತ್ರವನ್ನು ಸುನೈಫ್ ಹಾಗೂ ಪುಸ್ತಕದ ವಿನ್ಯಾಸವನ್ನು ಅಮೃತ ಆರ್ ಗುಂಜಾಳ್ ಅವರು ಸುಂದರವಾಗಿ ಚಿತ್ರಿಸಿ ಸಂಕಲನದ ಸೊಬಗನ್ನು ಹೆಚ್ಚಿಸಿದ್ದಾರೆ. ಸಿಕಂದರ್ ಅಲಿ ಅವರು ಈ ಕೃತಿಯನ್ನು ತಮ್ಮ ಗುರುತ್ರಯರಾದ ಆದ ಅಬ್ದುಲ್ ಹೈ.ತೋರಣಗಲ್ಲು, ಮೆಹಬೂಬ್ಬಿ ಶೇಖ್, ಇಮಾಮ್ ಗೋಡೆಕಾರ ಇವರಿಗೆ ಗೌರವಗಳೊಂದಿಗೆ ಅರ್ಪಣೆ ಮಾಡಿದ್ದಾರೆ.
ಗಜಲ್ ಕಾವ್ಯ ಸಾಹಿತ್ಯದ ಜೀವಾಳವಾದ ಪ್ರೇಮ, ಪ್ರೀತಿ, ವಿರಹ, ಧ್ಯಾನ, ಆರಾಧನೆ, ಸಮರ್ಪಣೆಗಳಾಗಿದ್ದರೂ ಸಮಾಜದ ನೋವಿಗೂ ಸ್ಪಂದಿಸಿ ಅನೇಕ ಗಂಭೀರವಾದ ವಿಷಯಗಳನ್ನು ಎತ್ತಿಕೊಂಡು ಗಜಲ್‍ಗಳನ್ನು ರಚಿಸಿದ್ದಾರೆ. ಸಾಮಾಜಿಕ ಅಸಮಾನತೆ, ಶೋಷಣೆ, ಸ್ತ್ರೀ ಸಂವೇದನೆ ಬಗ್ಗೆಯೂ ಗಜಲ್‍ಗಳನ್ನು ರಚಿಸಿದ್ದಾರೆ. ಸಿಕಂದರ್ ಅಲಿಯವರ ಗಜಲ್ ಕಾವ್ಯ ಸಾಹಿತ್ಯ ಸಂಕಲನವಾದ ಮೌನ ನಗರಿಯ ಮಾತು ಕೃತಿಯಲ್ಲಿ ಒಟ್ಟು 52 ಗಜಲ್ ಗಳಿವೆ. ಇವರು ತಮ್ಮ ತಖಲ್ಲುಸ್‍ನಾಮಾವನ್ನು ಅಲಿ ಎಂದು ನಮೂದಿಸಿಕೊಂಡಿದ್ದಾರೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಮೋಹಕತೆ, ಕಾಯುವಿಕೆಯ ಗಜಲ್ ಗಳೊಂದಿಗೆ ಸಮಾಜಮುಖಿಯಾದ ಜನಪರ ಗಜಲ್ ಗಳು ಇವೆ. ಓದಿಸಿಕೊಂಡು ಹೋಗುತ್ತವೆ, ಚಿಂತನೆಗೆ ಹಚ್ಚುತ್ತವೆ. ಕೆಲವು ಗಜಲ್ ಗಳಲ್ಲಿ ಸ್ವಲ್ಪ ವಾಚ್ಯತೆ ಕಂಡು ಬಂದು ಮಾಧುರ್ಯತೆ ಕಡಿಮೆ ಅನಿಸುತ್ತದೆ.
ಚಿಂದಿ ಆಯುವವನ ಬದುಕೆ ಚಿಂದಿಯಾದಾಗ ಯಾರಿಗೆ ಕೇಳಲಿ ನ್ಯಾಯ
ನುಡಿ ಮುತ್ತುಗಳೇ ನಗುವನ್ನು ನುಂಗಿದಾಗ ಯಾರಿಗೆ ಕೇಳಲಿ ನ್ಯಾಯ (ಗಜಲ್-9)
ಇದು ಒಂದು ಸಾಮಾಜಿ ಕಳಕಳಿಯ ಗಜಲ್ ಆಗಿದ್ದು ಇಂದು ಸಮಾಜದಲ್ಲಿ ವಾಸ್ತವಿಕವಾಗಿ ನಡೆಯುವ ಚಿತ್ರಣವೇ ಆಗಿದೆ. ಬಡವರಾದ ಶ್ರಮಜೀವಿಗಳ ಬದುಕು ಅಸ್ತವಸ್ತ ವಾಗಿ ಜೀವಿಸುವುದೇ ಕಷ್ಟವಾಗಿರುವಾಗ ಯಾರಲ್ಲಿ ನ್ಯಾಯ ಕೇಳಬೇಕು ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಮಾತುಗಳ ಸತ್ತು ಹೋಗಿರುವಾಗ ಕೊಟ್ಟ ಮಾತನಂತೆ ನಡೆಯೋದು ಆಗದೆ ಇದ್ದಾಗ ಯಾರಲ್ಲಿ ನ್ಯಾಯ ಕೇಳಬೇಕೆಂಬ ಪ್ರಶ್ನೆ ಓದುಗರನ್ನು ಚಿಂತನೆಗೆ ಹಚ್ಚುತ್ತದೆ.
ಮೌನವಾಗಿರು ನಿನ್ನಂತರಂಗವು ಅರಿತವರಿಲ್ಲ ಇಲ್ಲಿ
ಮಾತಿಗೂ ಬಂಧಿಸಿ ಬಿಡು ನೋವು ಬಲ್ಲವರಿಲ್ಲ ಇಲ್ಲಿ…
ನಮ್ಮನ್ನು ಅರಿತು ಕೊಂಡವರ ಮುಂದೆ ನಮ್ಮ ಸುಖ ದುಃಖಗಳನ್ನು ಹೇಳಿಕೊಂಡರೆ ಅವುಗಳಿಗೊಂದು ಪರಿಹಾರ ಸಿಗುತ್ತದೆ. ನಮ್ಮ ಅಂತರಂಗವನ್ನೇ ಅರಿಯದವರ ಮುಂದೆ ಮಾತಾಡಿ ಫಲವಿಲ್ಲ ಮೌನವಾಗಿರುವುದೇ ಒಳ್ಳೆಯದೆಂದು ಈ ಜಗದಲ್ಲಿ ಮಾತನ್ನು ಹರಿ ಬಿಡದೆ ಅದನ್ನು ಬಂಧಿಸುಡುವುದೇ ಒಳ್ಳೆಯದು ,ನಮ್ಮ ಮನದ ನೋವು ಅರಿಯದವರ ಮುಂದೆ ಹೇಳಿಕೊಳ್ಳಬಾರದೆಂಬ ಆಶಯನ್ನು ಹೊತ್ತಿದೆ ಈ ಗಜಲ್. ಸುಂಕದವನ ಮುಂದೆ ಸುಖ-ದುಃಖ ತೋಡಿಕೊಂಡರೆ ಪ್ರಯೋಜನವಿಲ್ಲ ಅವನಿಗೆ ಸುಂಕದ ಬೇಕμÉ್ಟೀ ಸುಖ ದುಃಖವಲ್ಲ ಎಂದು ಸುಂದರವಾಗಿ ನಿರೂಪಿಸಿದ್ದಾರೆ.
ಸತ್ಯ ಹೇಳಿದ ನೆಲದಲಿ ಸುಳ್ಳಿನದ್ದೇ ಕಾರುಬಾರು ಬಾಪು
ಅಹಿಂಸೆಯ ನೆಲದಲಿ ಹಿಂಸೆಯದ್ದೇ ದರ್ಬಾರು ಬಾಪು (ಗಜಲ್-27)
ಇದು ಒಂದು ಇಂದಿನ ರಾಜಕೀಯ ವಿಡಂಬನಾತ್ಮಕ ಗಜಲ್ ಆಗಿದೆ.ಸ್ವತಂತ್ರ ಸಲುವಾಗಿ ಹೋರಾಡಿದ ಗಾಂಧಿ (ಬಾಪು) ಸತ್ಯ ಅಹಿಂಸೆಗೆ ಮಹತ್ವ ಕೊಟ್ಟು ಸತ್ಯಾಗ್ರಹ ಮಾಡಿ ಸ್ವಾತಂತ್ರ್ಯವನ್ನು ಪಡೆದರು. ಆದರೆ ಇಂದಿನ ರಾಜಕೀಯ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಸುಳ್ಳಿನದೇ ಕಾರಬಾರ ಅಹಿಂಸೆಯದೇ ದರ್ಬಾರು ನಡೆದಿದೆ ಎಂದು ಮನದೊಂದು ಕವಿ ಬಾಪು ಮುಂದೆ ರೂಪಗಳೊಂದಿಗೆ ಇಂದಿನ ಪರಿಸ್ಥಿತಿಯನ್ನು ವಿಸ್ತರಿಸಿದ್ದಾರೆ.
ನೀನು ಕೆಡವಿದ ಅರಮನೆಯಲಿ ಜಾಗ ಕೊಡು
ಬಾಡಿರುವ ಪ್ರೀತಿಗೆ ನಿನ್ನೆದಿಯಲಿ ಜಾಗ ಕೊಡು (ಗಜಲ್-30)
ಇದು ಒಂದು ಭಗ್ನ ಪ್ರೇಮಿಯ ಮನದ ನೋವಿನ ಗೋಳಿನ ಕಥೆಯಾಗಿದೆ. ಪ್ರೀತಿಯ ಸಂಕೇತವಾದ ಒಂದು ಸುಂದರ ಅರಮನೆ ಕಟ್ಟಿದ್ದು ಅದು ಇಂದು ಬಿದ್ದು ಹೋಗಿದೆ, ನೀನು ಅದನ್ನು ಹಾಳೆಗೆಡುವಿದೆ. ಆದರೂ ಆ ಹಾಳು ಮನೆಯಲ್ಲಿ ವಾಸಿಸಲು ಸ್ವಲ್ಪ ಜಾಗ ಕೊಡು. ಬತ್ತಿದ ಪ್ರೀತಿಯ ಎದೆಯಲ್ಲಿ ವಾಸಿಸಲು ಸ್ವಲ್ಪ ಜಾಗ ಕೊಡು ಎಂದು ಭಗ್ನ ಪ್ರೇಮಿ ತನ್ನ ಪ್ರಿಯತಮನ ಅಥವಾ ಪ್ರತಿಮೆಯನ್ನು ಕೇಳುವ ಪರಿ ಸೊಗಸಾದ ರೂಪಕಗಳಿಂದ ಹೇಳಿದ್ದಾರೆ.
ಚಿಗುರುವ ವಸಂತವಿನ್ನೂ ಕಾಯಲಿ ದೂರಾಗಬೇಡ ಗೆಳತಿ
ಸಾವಿನ ಅವಧಿಯನ್ನು ಕಾಯಲಿ ದೂರಾಗಬೇಡ ಗೆಳತಿ (ಗಜಲ್-52)
ಜೀವನದಲ್ಲಿ ಸುಖ ದುಃಖ ಯಾವುದಕ್ಕಾದರೂ ನಾವು ಕಾಯಬೇಕು. ಸಮಯ ಬರದೆ ಏನ್ನೂ ನಡೆಯುವುದಿಲ್ಲ. ವನ ಚಿಗುರಬೇಕಾದರೆ ವಸಂತ ಬರಬೇಕು ಅಲ್ಲಿಯವರೆಗೆ ನಾವು ಕಾಯಬೇಕು ಮತ್ತು ಸಾವು ಬರಬೇಕಾದರೂ ಅದಕ್ಕೆ ತನ್ನದೇ ಆದ ಸಮಯ ಬೇಕು ಅಲ್ಲಿಯ ವರೆಗೆ ನಾವು ಕಾಯಬೇಕು. ಇದು ಪ್ರಕೃತಿಯ ನಿಯಮ ಜನನ ಮರಣಗಳು ಯಾರ ಕೈಯಲ್ಲಿ ಇಲ್ಲ ಕಾಲನ ಕೈಯಲ್ಲಿದ್ದು ಬರುವವರೆಗೆ ನಾವು ಕಾಯಬೇಕೆಂಬ ಭಾವನೆ ಈ ಗಜಲ್ ನಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ಸಿಕಂದರ್ ಅಲಿ ಅವರ ಗಜಲ್ ಕಾವ್ಯ ಕೃತಿ ಮೌನ ನಗರಿಯ ಮಾತು ಬಗ್ಗೆ ಒಟ್ಟಿಗೆ ಹೇಳುವುದಾದರೆ ಇಲ್ಲಿಯ ಗಜಲ್ ಗಳಲ್ಲಿ ಜೀವನ ಪ್ರೀತಿ, ಸಾಮಾಜಿಕ ತಲ್ಲಣ, ಮತ್ತೊಂದು ಕಡೆ ಆಕ್ರೋಶ ಜಗದ ನಿಯಮವನ್ನು ಬದಲಿಸಬೇಕೆಂಬ ಹಠ, ಒಟ್ಟಿನಲ್ಲಿ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಓದುಗರಿಗೆ ಚಿಂತನೆಗೆ ಹಚ್ಚುತ್ತವೆ. ಇವರಿಂದ ಇನ್ನೂ ಉತ್ತಮವಾದ ಗಜಲ್ ಗಳು ರಚನೆಯಾಗಲೆಂದು ಶುಭ ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ.