ಗಜಲ್
ಒಲವ ಕಣ್ಣು ಕನಸುಗಳ ಕಾಣಲಿ ಅವನ್ನೊಂದಿಗೆ
ಮನ ಯುಗಾದಿಯ ಸಿಹಿ ಕಹಿ ಹಂಚಲಿ ಅವನ್ನೊಂದಿಗೆ
ಹೃದಯಗಳ ಮಿಲನಕೆ ಮಾವು ಬೇವಿನ ಹೂ ತೋರಣ
ಪ್ರೀತಿಯ ಮಿಡಿಕಾಯಿ ಉಡಿ ತುಂಬಲಿ ಅವನ್ನೊಂದಿಗೆ
ಬಾನಲಿ ಮಳೆ ಬಿಲ್ಲಿನ ಏಳು ರಂಗಿನ ಚಿತ್ತಾರ
ಅರಳಿದ ಎದೆಯ ಸಂತಸ ಸೇರಲಿ ಅವನ್ನೊಂದಿಗೆ
ಹೊಂಗೆ ಸುಮ ಕಂಪಲಿ ತೇಲಿದೆ ದುಂಬಿಯ ಸಂಗೀತ
ಬದುಕ ಬಂಡಿಯ ನಾದವು ಬೆಸೆಯಲಿ ಅವನ್ನೊಂದಿಗೆ
ಹಳೆದು ಉದುರಿ ಹೊಸ ಚಿಗುರು ಮೂಡಿ ಸಂಭ್ರಮಿಸಲಿ ಜಗ
ನವ ವರುಷ ಹೊನ್ನ ಪ್ರಭೆ ಬೆಳಗಲಿ ಅವನ್ನೊಂದಿಗೆ
ಪ್ರಭಾವತಿ ಎಸ್.ದೇಸಾಯಿ, ವಿಜಯಪುರ
(ಗಜಲ್ ಕಾರರ ಪ್ರಕಾರ; ಮಾತ್ರಾ ಗಣಗಳಿಗೆ ಸಂಬಂಧಿಸಿ 22 ಮಾತ್ರೆಗಳನ್ನೊಳಗೊಂಡ ಗಜಲ್ ಇದಾಗಿದೆ.)