![]() |
![]() |
![]() |
![]() |
![]() |
ಗಜಲ್
ದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದಾದರೂ ಹೇಗೆ
ನಂಬಿಕೆ ಕಳೆದುಕೊಂಡು ನಾನು ಬದುಕುವುದಾದರೂ ಹೇಗೆ
ಸೋತು ಸುಣ್ಣವಾಗಿರುವೆನು ನಿನ್ನ ಹೃದಯವ ಗೆಲ್ಲಲಾಗದೆ
ನಿನ್ನ ತಳಮಳದಲ್ಲಿ ನಾನು ಉಸಿರಾಡುವುದಾದರೂ ಹೇಗೆ
ಪಾಪ-ಪುಣ್ಯಗಳ ಹಾವು ಏಣಿಯಾಟ ಯಾರಿಗೆ ಬೇಕಾಗಿದೆ
ನನ್ನ ಮನದ ತಳಮಳವ ನಿನಗೆ ತಿಳಿಸುವುದಾದರೂ ಹೇಗೆ
ಉಸಿರುಗಟ್ಟಿ ಸಾಯಿಸುತಿದೆ ತಬ್ಬಲಿತನದ ಭಾವದುಂಗುರ
ಪ್ರೀತಿ ನಾಟಕವಲ್ಲವೆಂದು ನಿನಗೆ ಹೇಳುವುದಾದರೂ ಹೇಗೆ
ಪುಡಿಯಾಗಿ ಬಿದ್ದ ಮನದ ಬಿಂಬಗಳಲಿ ನಿನ್ನದೆ ಪ್ರತಿಬಿಂಬ
ಕಾಯುತಿರುವ ಮಲ್ಲಿಗೆ ನಿನ್ನ ಪ್ರೀತಿ ಸಿಗುವುದಾದರೂ ಹೇಗೆ
-ರತ್ನರಾಯಮಲ್ಲ
![]() |
![]() |
![]() |
![]() |
![]() |