ಗ಼ಜ಼ಲ್
ನಾನು ನೋವಿನೊಂದಿಗೆ ನೆಂಟಸ್ತನ ಬೆಳೆಸಿಬಿಟ್ಟೆ
ಸುಂದರವಾದ ಸಾವಿನೊಂದಿಗೆ ಸರಸ ಆಡಿಬಿಟ್ಟೆ
ಹೇಳಿದ್ದು ಕೇಳಿ ನೀಲಾಮಾಗುವವರು ಯಾರಿಲ್ಲ
ಬೆಳಕಲಿ ಕತ್ತಲು ಹುಡುಕುವ ಕಲೆ ಕಲಿತುಬಿಟ್ಟೆ
ಬಯಕೆಗಳ ಹಿಡಿದು ಬರುವೆನೆಂದು ಹೇಳಿಹೋಗಿದ್ದೆ
ಕಠಿಣ ಬದುಕಿನೊಂದಿಗೆ ರಾಜಿಯಾಗಿ ಉಳಿದುಬಿಟ್ಟೆ
ಕಾಯುತ್ತೇನೆಂದು ಬೆನ್ನು ತೋರಿಸಿ ಹೋದೆಯಲ್ಲ
ಉತ್ತರ ಹುಡುಕುತ್ತಾ ಹಾಳಾಗುವುದು ನಿಲ್ಲಿಸಿಬಿಟ್ಟೆ
ಕೊಟ್ಟ ಗಾಯಗಳು ಮರೆಯುವುದು ಸುಲಭವಲ್ಲ
ಮಾಸಲಾರದ ದರ್ದುಗಳ ಲೆಕ್ಕ ಚುಕ್ತಾ ಮಾಡಿಬಿಟ್ಟೆ
ಇಲ್ಲಿ ನಟನೆಯೂ ದುಬಾರಿ ವೆಚ್ಚ ಕೇಳುತ್ತಿದೆ ಅಲಿ
ಕಾಲಕ್ಕೆ ತಕ್ಕಂತೆ ಬೆಲೆ ನಿಗಧಿಪಡಿಸಿ ಮರೆತುಬಿಟ್ಟೆ
-ಸಿಕಂದರ್ ಅಲಿ