![]() |
![]() |
![]() |
![]() |
![]() |
ಗಜಲ್…
ಇದೆಲ್ಲ ನಿನಗಾಗಿಯೇ ಎಂದು ನಿನಗೇಕೆ ತಿಳಿಯದು ಸಖಿ
ತಿಳಿದು ತಿಳಿಯದಂತಹ ನಿನ್ನ ಮೌನ ಸುಖವರಿಯದು ಸಖಿ
ಬೇಕೆ ಬೇಡವೇ ಏನಾದರೊಂದೊಮ್ಮೆ ಹೇಳಿ ಬಿಡಬಾರದೇನೇ
ದಿನಾ ಕೊಲ್ಲಬೇಡ ಒಮ್ಮೆಲೇ ಕೊಲ್ಲೋದು ಒಳ್ಳೆಯದು ಸಖಿ
ಹಗಲಿರುಳು ನಿನ್ನದೇ ನೆನಪಲಿರುವ ಹುಚ್ಚು ಜೀವಾಣುಗಳಿವು
ಅನುಕ್ಷಣ ಕಾಣದಿರೆ ಬೆಚ್ಚಿ ಬಸವಳಿದು ಬಳಲುವುದು ಸಖಿ
ನಿನ್ನ ಒಲವ ಭರವಸೆಯ ಮೇಲೆ ಬದುಕಿರುವ ಜೀವವಿದು
ಆಗದಿರೆ ಹೇಳಿಬಿಡು ಸೇರಲಿ ತನ್ನ ಮಸಣ ಮನೆಗದು ಸಖಿ
ಎಷ್ಟಂಥ ಬಳಲಿಸುವಿ ಆಕಾಶದ ನಕ್ಷತ್ರಗಳ ತೋರಿಸುತ್ತಾ ನಿತ್ಯ
ಹೊನ್ನಸಿರಿ’ ವ್ಯರ್ಥ ನೋಯಿಸಿ ನೀನು ನೋವು ಪಡಬಾರದು ಸಖಿ
ಸಿದ್ಧರಾಮ ಹೊನ್ಕಲ್
ಶಹಾಪುರ.
![]() |
![]() |
![]() |
![]() |
![]() |